ಕನ್ನಡಿಗರ ಒನ್-ಸ್ಟಾಪ್ ಡಿಜಿಟಲ್ ಡೆಸ್ಟಿನೇಶನ್

ತಾಂತ್ರಿಕ ಜ್ಞಾನ – ಎಲ್ಲವೂ ಕನ್ನಡದಲ್ಲೇ – ಅದು ನಿಮ್ಮ ಬೆರಳ ತುದಿಯಲ್ಲೇ.

“Flagship Killer” ಯುಗ ಮುಗಿಯಿತೇ: OnePlus ತನ್ನ ಮಾರಾಟವನ್ನುನಿಜವಾಗಿಯೂ ನಿಲ್ಲಿಸುತ್ತಿದೆಯೇ?

Spread the love


“Never Settle” ಎಂಬ ಟ್ಯಾಗ್‌ಲೈನ್ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ್ದ OnePlus, ಈಗ ದೊಡ್ಡ ತಿರುವಿನಲ್ಲಿದೆ. “Flagship Killer” ಎಂದು ಕರೆಸಿಕೊಳ್ಳುತ್ತಿದ್ದ ಈ ಬ್ರ್ಯಾಂಡ್, ಚೀನಾದ ಹೊರಗಿನ ಮಾರುಕಟ್ಟೆಗಳಿಂದ ಹಂತಹಂತವಾಗಿ ಹೊರನಡೆಯುತ್ತಿದೆ ಎಂಬ ಸುದ್ದಿ ಟೆಕ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರತಿಷ್ಠಿತ ಸುದ್ದಿ ಸಂಸ್ಥೆ Bloomberg ವರದಿಯ ಪ್ರಕಾರ, US ಮತ್ತು ಯುರೋಪ್‌ನಲ್ಲಿ OnePlus ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಹಾಗಾದರೆ ಭಾರತದ ಬಳಕೆದಾರರ ಕಥೆ ಏನು? ನಿಮ್ಮ ಫೋನ್‌ಗಳಿಗೆ ಏನಾಗುತ್ತದೆ? ಬನ್ನಿ, ಇದರ ಸಂಪೂರ್ಣ ವಿವರ ತಿಳಿಯೋಣ.


OnePlus ನಿಜವಾಗಿಯೂ ಇನ್ನುಮುಂದೆ ಇರುವುದಿಲ್ಲವಾ?


ಹೌದು ಮತ್ತು ಇಲ್ಲ — ಎರಡೂ ಸತ್ಯ. ವರದಿಗಳ ಪ್ರಕಾರ, ಮಾತೃ ಕಂಪನಿ Oppo ತನ್ನ ಜಾಗತಿಕ ವ್ಯವಹಾರವನ್ನು ಪುನರ್ ರಚನೆ ಮಾಡುತ್ತಿದೆ, ಈ ಕಾರಣದಿಂದಾಗಿ US ಮತ್ತು ಯುರೋಪ್‌ನಲ್ಲಿ OnePlus ತನ್ನ ಕಾರ್ಯಾಚರಣೆ ನಿಲ್ಲಿಸುತ್ತಿದೆ. ಆದರೆ ಭಾರತದ ಗ್ರಾಹಕರು ಸದ್ಯಕ್ಕೆ ಗಾಬರಿಪಡುವ ಅಗತ್ಯವಿಲ್ಲ. Flagship Killer” ಯುಗ ಮುಗಿಯಿತೇ: OnePlus ತನ್ನ ಮಾರಾಟವನ್ನುನಿಜವಾಗಿಯೂ ನಿಲ್ಲಿಸುತ್ತಿದೆಯೇ? ಎಂಬ ಪ್ರಶ್ನೆಗೆ ದೇಶದಲ್ಲಿ ವ್ಯವಹಾರ ಎಂದಿನಂತೆ ನಡೆಯುತ್ತಿದೆ ಎಂದು OnePlus India ಸ್ಪಷ್ಟಪಡಿಸಿದೆ ಮತ್ತು ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದೆ. ಆದರೂ, 2027ರ ವೇಳೆಗೆ ಜಾಗತಿಕ ಮಾರುಕಟ್ಟೆಯಿಂದ ಕಂಪನಿ ಸಂಪೂರ್ಣವಾಗಿ ಹೊರನಡೆಯುವ ಸಾಧ್ಯತೆಗಳಿವೆ ಎಂಬುದು ಮಾರುಕಟ್ಟೆ ತಜ್ಞರ ಲೆಕ್ಕಾಚಾರ, ಆದರೆ ಇದು ಇನ್ನೂ ಅಧಿಕೃತವಾಗಿಲ್ಲ.

OnePlus flagship killer


ಯಶಸ್ಸಿನ ಹಾದಿ: ಜನರಿಗೆ OnePlus ಏಕೆ ಇಷ್ಟವಾಯಿತು?

  • 2013-14 ರಲ್ಲಿ ಎಂಟ್ರಿ ಕೊಟ್ಟ OnePlus ಕೇವಲ ಮೊಬೈಲ್ ಮಾರಾಟ ಮಾಡಲಿಲ್ಲ, ಬದಲಾಗಿ ಪ್ರೀಮಿಯಂ ಮೊಬೈಲ್‌ಗಳಲ್ಲಿ ಕ್ರಾಂತಿಯನ್ನೇ ಮಾಡಿತು. ಜನರು ಈ ಬ್ರ್ಯಾಂಡ್‌ಗೆ ಕನೆಕ್ಟ್ ಆಗಲು ಮುಖ್ಯ ಕಾರಣಗಳು:
  • Flagship Killer ಭರವಸೆ: Apple ಮತ್ತು Samsung ನಂತಹ ದೈತ್ಯ ಕಂಪನಿಗಳ ಫೋನ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಫೀಚರ್‌ಗಳನ್ನು ನೀಡಿ ಮೊಬೈಲ್ ಬಳಕೆದಾರರನ್ನು ತನ್ನ ಕಡೆಗೆ ಸೆಳಯಿತು.
  • ವೇಗವಾದ ಅಪರೇಟಿಂಗ್ ಸಿಸ್ಟಂ: ಯಾವುದೇ ಬೇಡವಾದ ಆಪ್‌ಗಳಿಲ್ಲದ ವೇಗದ OxygenOS ಅಪರೇಟಿಂಗ್ ಸಿಸ್ಟಂ Android ಪ್ರಿಯರಿಂದ ಮೆಚ್ಚುಗೆ ಗಳಿಸಿತು.
  • ಕಮ್ಯುನಿಟಿ ಒಕ್ಕೂಟ: ಆರಂಭದಲ್ಲಿ ತಂದ ಇನ್ವೈಟ್-ಓನ್ಲಿ ಖರೀದಿ ವ್ಯವಸ್ಥೆಯು ಗ್ರಾಹಕರಲ್ಲಿ ವಿಶೇಷತೆಯ ಭಾವನೆ ಮೂಡಿಸಿ, ದೊಡ್ಡ ಅಭಿಮಾನಿ ಬಳಗವನ್ನೇ ಸೃಷ್ಟಿಸಿತ್ತು.


ದಿಢೀರ್ ಕುಸಿತಕ್ಕೆ ಕಾರಣಗಳೇನು?


ಇಷ್ಟೊಂದು ಜನಪ್ರಿಯತೆ ಗಳಿಸಿದ ಬ್ರ್ಯಾಂಡ್ ದಿಢೀರ್ ಎಂದು ಇಂಥದ್ದೊಂದು ನಿರ್ಧಾರಕ್ಕೆ ಬರಲು ಆರ್ಥಿಕ, ತಾಂತ್ರಿಕ ಮತ್ತು ಭೌಗೋಳಿಕ ರಾಜಕೀಯ ಒತ್ತಡಗಳು ಕಾರಣವಾಗಿವೆ:
• ತೀವ್ರ ಪೈಪೋಟಿ ಮತ್ತು ಆರ್ಥಿಕ ನಷ್ಟ: ಪಾಶ್ಚಿಮಾತ್ಯ ದೇಶಗಳ ಪ್ರೀಮಿಯಂ ಶ್ರೇಣಿಯ ಮೊಬೈಲ್ ಮಾರುಕಟ್ಟೆಯಲ್ಲಿ Apple ಮತ್ತು Samsung ಎದುರುಗಡೆ ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಜೊತೆಗೆ Motorola ಮತ್ತು Google Pixel ನಂತಹ ಕಂಪನಿಗಳಿಗಿಂತಲೂ ಹಿಂದೆ ಉಳಿಯಿತು.
• ಬಿಡಿಭಾಗಗಳ ಕೊರತೆ ಮತ್ತು ವೆಚ್ಚ: ಸ್ಮಾರ್ಟ್‌ಫೋನ್ ಉದ್ಯಮವು ತೀವ್ರ ಮೆಮೊರಿ (RAM ಮತ್ತು Storage) ಬಿಡಿಭಾಗಗಳ ಕೊರತೆ ಎದುರಿಸುತ್ತಿದೆ. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಾಗಿ, ಪ್ರಮುಖ Nord ಸರಣಿಯ ಲಾಭದ ಪ್ರಮಾಣ ಕುಸಿಯಿತು.
• Oppo ಸಂಸ್ಥೆಯ ಕಾರ್ಯತಂತ್ರ: 2021ರಲ್ಲಿ OnePlus ಅಧಿಕೃತವಾಗಿ Oppo ದ ಉಪ-ಬ್ರಾಂಡ್ ಆದಾಗಿನಿಂದ ತನ್ನ ಸ್ವಂತಿಕೆ ಕಳೆದುಕೊಳ್ಳುತ್ತಾ ಬಂತು. ಪ್ರಸ್ತುತ ಬದಲಾವಣೆಗಳ ಪ್ರಕಾರ, OnePlus ಕೇವಲ ಚೀನಾಕ್ಕೆ ಸೀಮಿತವಾಗಲಿದ್ದು, ಸಿಸ್ಟರ್ ಬ್ರ್ಯಾಂಡ್ Realme ಯುರೋಪ್ ಮಾರುಕಟ್ಟೆಯತ್ತ ಗಮನ ಹರಿಸಲಿದೆ.
• ಕಾನೂನು ಸವಾಲುಗಳು: ಪಾಶ್ಚಿಮಾತ್ಯ ದೇಶಗಳಲ್ಲಿ ಚೀನೀ ಬ್ರ್ಯಾಂಡ್‌ಗಳಿಗೆ ತಪಾಸಣೆ ಹೆಚ್ಚಾಗಿದೆ. ಜೊತೆಗೆ ವ್ಯಾಪಾರ ರಹಸ್ಯಗಳ ದುರುಪಯೋಗದ ಆರೋಪದ ಮೇಲೆ Apple ಹೂಡಿರುವ ಮೊಕದ್ದಮೆಯು US ನಲ್ಲಿ ಕಾನೂನು ತೊಡಕಾಗಿ ಪರಿಣಮಿಸಿದೆ.


ಭಾರತದ ಬಳಕೆದಾರರಿಗೆ ಅಧಿಕೃತ ಮಾಹಿತಿ ಮತ್ತು ಸಾಫ್ಟ್‌ವೇರ್ ಬದಲಾವಣೆ:

ಮುಚ್ಚುವ ಕುರಿತಂತೆ ಇದ್ದ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ OnePlus, ಭಾರತದಲ್ಲಿ ಕಾರ್ಯಾಚರಣೆ ಎಂದಿನಂತೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. ಇತ್ತೀಚೆಗಷ್ಟೇ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ N series ಅನ್ನು ಸಹ ಪರಿಚಯಿಸಿದೆ. ಆದರೆ, ಮುಂಬರುವ ದಿನಗಳಲ್ಲಿ OnePlus ಫೋನ್‌ಗಳು OxygenOS ನಿಂದ ColorOS ಗೆ ಅಪ್‌ಡೇಟ್ ಆಗಲಿವೆ. ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಅನ್ನು ಸುಗಮಗೊಳಿಸಲು ಮತ್ತು ಜಂಟಿ R&D ಸಾಮರ್ಥ್ಯಗಳನ್ನು ಒಟ್ಟಾಗಿ ಬಳಸಿಕೊಳ್ಳಲು ಈ ಬದಲಾವಣೆ ಮಾಡಲಾಗುತ್ತಿದೆ. ಮೆಮೊರಿ ಮಾರುಕಟ್ಟೆಯ ಏರಿಳಿತಗಳನ್ನು ನೋಡಿದರೆ ಭವಿಷ್ಯದಲ್ಲಿ OnePlus ಮತ್ತು Realme ಎರಡೂ ಹಂತಹಂತವಾಗಿ Oppo ಜೊತೆಗೆ ವಿಲೀನಗೊಳ್ಳುವ ಸಾಧ್ಯತೆ ದಟ್ಟವಾಗಿದೆ.


OnePlus ಬಳಕೆದಾರರು ಈಗ ಏನು ಮಾಡಬೇಕು?


ನಿಮ್ಮ ಬಳಿ ಹೊಸ OnePlus 15 ಇರಲಿ ಅಥವಾ ಹಳೆಯ Nord ಇರಲಿ, ಸದ್ಯಕ್ಕೆ ಟೆನ್ಷನ್ ಬೇಡ.
• ಫೋನ್ ಬಳಕೆಯನ್ನು ಮುಂದುವರಿಸಿ: ಸದ್ಯಕ್ಕೆ ನಿಮ್ಮ ಫೋನ್ ಬದಲಾಯಿಸುವ ಅವಶ್ಯಕತೆ ಇಲ್ಲ. ಕಂಪನಿಯು ಫೋನ್‌ಗಳನ್ನು ಹಿಂಪಡೆಯುತ್ತಿಲ್ಲ. ಈಗಾಗಲೇ ಇರುವ ಫೋನ್‌ಗಳಿಗೆ ಸಾಫ್ಟ್‌ವೇರ್ ಅಪ್‌ಡೇಟ್, ಸೆಕ್ಯೂರಿಟಿ ಪ್ಯಾಚ್ ಮತ್ತು ವಾರಂಟಿ ಎಂದಿನಂತೆ ಸಿಗಲಿವೆ.
• ಹೊಸ ಫೋನ್ ಖರೀದಿಸುವವರಿಗೆ: ಹೊಸ ಫೋನ್ ಖರೀದಿಸುವ ಪ್ಲಾನ್ ಇದ್ದರೆ ಮತ್ತು ದೀರ್ಘಕಾಲದ ಸಾಫ್ಟ್‌ವೇರ್ ಬೆಂಬಲ ಬೇಕಿದ್ದರೆ Samsung, Google Pixel ಅಥವಾ Apple ನಂತಹ ಸ್ಟ್ಯಾಂಡರ್ಡ್ ಬ್ರ್ಯಾಂಡ್‌ಗಳನ್ನು ಪರಿಗಣಿಸುವುದು ಒಳಿತು.
• Oppo ಫೋನ್‌ಗಳತ್ತ ಗಮನ: ನೀವು OnePlus ಪ್ರಿಯರಾಗಿದ್ದರೆ ಭವಿಷ್ಯದಲ್ಲಿ Oppo ಫೋನ್‌ಗಳನ್ನು ಖರೀದಿಸುವ ಬಗ್ಗೆಯೂ ಯೋಚಿಸಬಹುದು, ಏಕೆಂದರೆ ಮುಂದಿನ ದಿನಗಳಲ್ಲಿ Oppo ಮೊಬೈಲ್ ತಂತ್ರಜ್ಞಾನವನ್ನು ಒಟ್ಟಿಗೆ ಅಭಿವೃದ್ಧಿಪಡಿಸಲು ಕಂಪನಿ ನಿರ್ಧರಿಸಿದೆ.

OnePlus ಮೊಬೈಲ್‌ಗಳ ಕುರಿತ ಇತ್ತೀಚಿನ ಸುದ್ದಿಗಳನ್ನು ಇಲ್ಲಿ ನೋಡಬಹುದು. 2026 ರಲ್ಲಿ ಯಾವ ಮೊಬೈಲ್ ಖರೀದಿಸಬೇಕೆಂದು ಯೋಚಿಸುತ್ತಿರುವಿರಾ ಹಾಗಾದರೆ ಇಲ್ಲಿಗೆ ಭೇಟಿ ನೀಡಿ.


ಕಾಮೆಂಟ್ ಬರೆಯಿರಿ